Sunday, February 28, 2010

ಕೋರಿಕೆ

ಓ ನನ್ನ ಮನವೇ ನನ್ನದೊಂದು ಕೋರಿಕೆ
ಪ್ರೇಮವೆಂಬ ನಿನ್ನ ಸೆಳೆತಕೆ
ಬಲಿಯಾಗಲಾರೆ ಅವಳ ಪ್ರೀತಿಗೆ
ಬಿಟ್ಟುಬಿಡು ನನ್ನ ಪಾಡಿಗೆ
ನಾನು ನಾನಾಗಿ ಬದುವುದಕೆ
ಮುದ್ದು ಮನವೇ ಕೇಳು ನನ್ನ ಕೋರಿಕೆ
ನಾನು ಹೇಳುವುತಿರುವುದು ನಿನ್ನ ಒಳ್ಳೇದಕ್ಕೆ
ವ್ಯತ್ಯಾಸವುಂಟು ಪ್ರೀತಿಗೆ .... ಜೀವನಕೆ ..

ಅಮಾವಾಸ್ಯೆಯ ಬೆಳದಿಂಗಳು

ಸಂಜೆ ಸೂರ್ಯನು ಮುಳುಗುತಿರಲು
ಆವರಿಸುತಿತ್ತು ಅಮಾವಾಸ್ಯೆಯ ಕತ್ತಲು,
ಮೆಲ್ಲಗೆ ಮೇಲೆರುತಿತ್ತು ಕನ್ಯಾಕುಮಾರಿಯಲ್ಲಿ ಕಡಲು
ಪಾದಗಳಿಗೆ ಮುತ್ತಿಡುತಿತ್ತು ಅಲೆಗಳು ,
ನನ್ನ ನಲ್ಲೆಯು ಸುಮ್ಮನೆ ನಕ್ಕಳು
ಕತ್ತಲೆಯಲ್ಲಿ ಚಿಮ್ಮಿತೊಂದು ಬೆಳದಿಂಗಳು
ಮನದಲ್ಲಿ ಏರಿತೊಂದು ಅಮಲು
ಅಷ್ಟು ಸಾಕಾಯಿತು ನಾ ನಶೆಯಲ್ಲಿ ತೇಲಿ ಹೋಗಲು
ಹಾರಡುತಿರುವೆ ಆ ಪ್ರೀತಿಯಲ್ಲಿ ಈಗಲೂ .....